₹600₹550
Ex Tax: ₹550
ಆ ಕಾಲ-ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಪೋರ್ಚುಗೀಸರು ಭಾರತೀಯ ರಾಜರುಗಳ ಒಳಜಗಳದ ಸುಸಂಧಿಯನ್ನೇ ಸಾಧಿಸಿ ‘ತಮ್ಮ ರೊಟ್ಟಿ ಜಾರಿ ಎಲ್ಲಿ ಬೆಣ್ಣೆಗೆ ಬೀಳುತ್ತದೆ’ ಎಂದು ಕಾಯುತ್ತಿದ್ದ ಕಾಲ. ದಕ್ಷಿಣದಲ್ಲಿ ಪ್ರಬಲರಾದ ಮರಾಠರು, ಹೈದರಾಬಾದಿನ ನಿಜಾಮ, ಮೈಸೂರು ಸಂಸ್ಥಾನದ ಸರ್ವಾಧಿಕಾರಿ ಹೈದರಾಲಿ-ಇವರ ನಿರಂತರ ಹೋರಾಟದ ಏಳು-ಬೀಳುಗಳನ್ನವಲಂಬಿಸಿ ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ.ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ ಪಾಳೆಯಗಾರರಿದ್ದಾಗ ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಮ್ದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣಸಿದ ಏಕೈಕ ಗಂಡು ಪಾಳೆಯಗಾರ-ಚಿತ್ರದುರ್ಗದ ಮದಕರಿನಾಯಕ.ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ಶತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು-ತ.ರಾ.ಸು. ಒಬ್ಬರಿಗೇ.ಸುಳಿಯಲ್ಲಿ ಸಿಕ್ಕವನಂತೆ ದುರಂತದೆಡೆಗೆ ಸಾಗುವ ಮದಕರಿನಾಯಕನ ಬದುಕಿನ ವಿವಿಧ ಮುಖಗಳು ಬಿಚ್ಚಿಕೊಳ್ಳುವ ಬೃಹತ್ವೇಶ್ಮದ ಮೇಲೆ ಎಲ್ಲ ರಸಗಳ ವರ್ಣಗಳನ್ನೂ ಬಳಸಿ ಚಿತ್ರಿಸುವಾಗ ಅರವತ್ತಮೂರರ ತ.ರಾ.ಸು. ಹದಿಹರೆಯದವರನ್ನೂ ನಾಚಿಸುವ ಬಿಸಿನೆತ್ತರ ಕಾವನ್ನು ಕಾರುತ್ತಿರುವಮ್ತೆ, ಪುಟಪುಟಗಳಲ್ಲೂ ತಮ್ಮ ಮಣ್ಣಿನ ಮೇಲಣ ಅಭಿಮಾನವನ್ನು ಅಭಿವ್ಯಕ್ತಿಸಿದಂತೆ ಕಾಣುತ್ತದೆ; ನೆತ್ತರು ಕುದಿಸುವ ತಮ್ಮ ಎಂದಿನ ಸಿಡಿಲಭಾಷೆಯಲ್ಲಿ, ಕಣ್ಣುಕೋರೈಸುವ ಮಿಂಚಿನ ಶೈಲಿಯಲ್ಲಿ, ಆಳ ಅನುಭವ-ಚಿಂತನಗಳ ರಸಪಾದಕಲ್ಲಿ ಈ ಕೃತಿಯನ್ನೊಂದು ರುದ್ರಾಧ್ಯಾಯವನ್ನಾಗಿಸಿದ್ದಾರೆ...
Add to Cart