ಆತ್ಮ ಚರಿತ್ರೆ
ಆತ್ಮ ಚರಿತ್ರೆ
ಪ್ರಚಂಡ ರಣ ಪರಾಕ್ರಮಿ, ಧ್ಯೇಯಜೀವಿ, ಸಾಹಸಿ, ಧೀರೋದಾತ್ತ ಕ್ರಾಂತಿಪುರುಷನಾಗಿ ಸ್ವಾತಂತ್ರ್ಯಯಜ್ಞದಲ್ಲಿ ಪೂರ್ಣಾಹುತಿಯಾದ ರಾಷ್ಟ್ರಭಕ್ತ ಚಂದ್ರಶೇಖರ ಅಜಾದ್, ದೇಶಪ್ರೇಮಿ ಸ್ವಾಭಿಮಾನಿಗಳ ನೆಚ್ಚಿನ ಬಂಟ. ಅಜಾದರ ಕೈ ಬರಹ ಹಾಗೂ ಅವರ ಕ್ರಾಂತಿಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಪೂರ್ವ ಫೋಟೋ ದಾಖಲೆಗಳೊಂದಿಗೆ, ಈ ಅದ್ವಿತೀಯ ಸ್ವಾತಂತ್ರ್ಯ ಸಮರ ಸೇನಾನಿಯ ಜಾಜ್ವಲ್ಯಮಾನ ರೋಮಾಂಚನಕಾರಿ ಜೀವನ ಪರಿಚಯ ಕಥಾನಕವನ್ನು ಈ ಗ್ರಂಥದಲ್ಲಿ ಕಟ್ಟಿಕೊಡಲಾಗಿದೆ...
Add to Cartಕ್ರಾಂತಿಕಾರಿ ಮುಖಂಡ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜೀವನ ಚರಿತ್ರೆ. ಸುಬಾಷ್‌ರವರಿಗೆ ಸಂಬಂಧಪಟ್ಟ ಕೆಲವು ಆಶ್ಚರ್ಯಕಾರಕ ಆದರೆ ಸತ್ಯವಾದ ಸಂಗತಿಗಳ ಉಲ್ಲೇಖ. ನೇತಾಜಿ ಬಾಲ್ಯ, ಯೌವನ ಹಾಗೂ ಐ.ಎನ್.ಎ. ದಿನಗಳ ಅಪ್ಯಾಯಮಾನಕರ ಚಿತ್ರಣ. ನಿಖರ ಮಾಹಿತಿ ಸಮೃದ್ಧಿಯಿಂದ ತುಂಬಿದ ರಮ್ಯೋಜ್ವಲ ಶೈಲಿಯ ಗದ್ಯ ಬರಹ. ನೇತಾಜಿಯವರ ಜನ್ಮಶತಮಾನೋತ್ಸವದ ನೆನಪಿಗಾಗಿ ಪ್ರಕಟಿಸಿದ ಗ್ರಂಥ ಇದು...
Add to Cartಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ...

Add to Cartಬೆಂಗಳೂರಿನಲ್ಲಿ ಸುಮಾರು 10,000 ಆಟೋರಿಕ್ಷಾಗಳು ಇರಬಹುದು. ಅವುಗಳಲ್ಲಿ ಸುಮಾರು 80% ಆಟೋಗಳ ಮೇಲೆ ಶಂಕರ್ ನಾಗ್ ಚಿತ್ರವಿದೆ. ಆಶ್ಚರ್ಯವೇನೆಂದರೆ ಶಂಕರ್ ನಾಗ್ ಕಾಲಾನಂತರದಲ್ಲಿ ಹುಟ್ಟಿ ಇಂದು ಆಟೋ ಚಾಲಕರಾಗಿರುವ ಎಷ್ಟೋ ಮಂದಿ ತಮ್ಮ ಆಟೋಗಳ ಹಿಂದೆ ಶಂರ್‌ನಾಗ್‌ರ ಚಿತ್ರಗಳನ್ನು ಆಂಟಿಸಿಕೊಂಡಿದ್ದಾರೆ. ಇದು ಕೇವಲ ಅಭಿಮಾನವಲ್ಲ.. ಬದಲಿಗೆ ಕನ್ನಡಿಗರಿಗೆ ಅವರ ಮೇಲಿರುವ ಪ್ರೀತಿ. ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೇರುನಟ ಡಾ. ರಾಜ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಎಂದರೆ ಅದು ಶಂಕರ್ ನಾಗ್ ಮಾತ್ರ.ಶಂಕರ್ ಇದ್ದಿದ್ರೆ ನಮ್ಮ ಕನ್ನಡ ಚಿತ್ರರಂಗ ಎಲ್ಲೋ ಇರುತ್ತಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. 2014ರ ಈ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ರೈಲನ್ನು ಆಗಿನ ಕಾಲಕ್ಕೆ ಕಾರ್ಯ ರೂಪಕ್ಕೆ ತರಲು ಬಯಸಿದ್ದರು ಶಂಕರ್ ನಾಗ್. ಕೇವಲ ಚಲನಚಿತ್ರಗಳಷ್ಟೇ ಅಲ್ಲ. ಇಡೀ ಬೆಂಗಳೂರಿಗೆ ಅವರಂತಹ ಒಬ್ಬ ದೂರ ದೃಷ್ಟಿ ಮತ್ತು ವಿಶಾಲ ದೃಷ್ಟಿ ಇರುವ ನಾಯಕ ಬೇಕಿತ್ತು. ಬೇಕಿದೆ.. ಎಂದು ಹೇಳುವವರು ಸಾವಿರಾರು ಮಂದಿ.ಈ ಎಲ್ಲ ಪ್ರಶ್ನೆಗಳಿಗೆ, ಅವರನ್ನು ಬಹಳ ಹತ್ತಿರದಿಂದ ಬಲ್ಲ, ಅವರೊಂದಿಗೆ ಹುಟ್ಟಿ ಬೆಳೆದ ಅವರ ಅಣ್ಣ ಶ್ರೀ ಅನಂತ ನಾಗ್‌ರಿಂದಲೇ ಉತ್ತರ ಪಡೆಯಬಹುದೇ? ಈ ಪ್ರಶ್ನೆಗಳ ಉತ್ತರಗಳ ಜೊತೆಗೆ, ಶಂಕರ್ ನಾಗ್‌ರ ಬದುಕು.. ಅವರ ಮನಸ್ಸು ಯೋಚಿಸುತ್ತಿದ್ದ ರೀತಿ.. ಅವರ ಕನಸುಗಳು.. ಅವರ ಕಾರ್ಯವೈಖರಿ.. ಬದುಕಿನೆಡೆಗಿನ ಅವರ ಅದಮ್ಯ ಉತ್ಸಾಹ.. ಇವುಗಳ ಪರಿಚಯವು ಆಗಬಹುದೇ?ಓದಿ ನೋಡಿ.. ಶ್ರೀ ಅನಂತ ನಾಗ್‌ರ ಪ್ರೀತಿಯ, ಕನ್ನಡಿಗರ ಅಭಿಮಾನದ... ನನ್ನ ತಮ್ಮ ಶಂಕರ...
Add to Cartಖ್ಯಾತ ನಟ ವಿಷ್ಣುವರ್ಧನ್ ಜೊತೆಗಿನ ನೆನಪುಗಳು ಲೇಖಕರು: ಎಸ್ ವಿ ರಾಜೇಂದ್ರ ಸಿಂಗ್ ಬಾಬುಪ್ರಕಾಶಕರು:ಅಂಕಿತ ಪುಸ್ತಕ, Ankita Pustaka..
Add to Cartಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗುರಿಗಳ ಬೆಳವಣಿಗೆಯ ಒಂದು ಹಂತದ ಕ್ರಿಯಾಶೀಲ ಸ್ವರೂಪ ಭಗತ್‌ಸಿಂಗ್. ಸ್ವಾತಂತ್ರ್ಯವೊಂದನ್ನೇ ಗುರಿಯಾಗಿಟ್ಟುಕೊಂಡು ಅದರ ಗಳಿಕೆಗೆ ಯಾವುದೇ ವಿಧಾನವನ್ನಾದರೂ ಬಳಸಬಹುದೆನ್ನುವವರ ಮತ್ತು ವೈಜ್ಞಾನಿಕ ಸಮಾಜವಾದವೇ ರಾಷ್ಟ್ರದ ಎಲ್ಲ ಸಮಸ್ಯೆಗಳಿಗೂ ಪರಿಹಾರವಾದ್ದರಿಂದ ಅದರ ಸ್ಥಾಪನೆಯೇ ನಮ್ಮ ಹೆಗ್ಗುರಿಯಾಗಬೇಕೆನ್ನುವವರ ನಡುವಿನ ಕಂದರಕ್ಕೆ ಸೇತುವೆಯಾದ ಭಗತ್‌ಸಿಂಗ್. ರಾಜಕೀಯ ಸ್ವಾತಂತ್ರ್ಯದ ಆಧಾರದ ಮೇಲೆ ಮಾತ್ರ ರಾಷ್ಟ್ರೀಯ ವಿಕಾಸ ಸಾಧ್ಯವೆಂಬ ದೃಷ್ಟಿಯಿಂದ ಹೋರಾಡಿದ ಚಿಂತಕ ಅವನು. ಕಾಲ್ಪನಿಕ ಅಹಿಂಸೆಯ ಶಕಕ್ಕೆ ಇತಿಶ್ರೀ ಹಾಡಿದವರ ಪ್ರತೀಕವಾದ ಭಗತ್ ಜನತೆ ಒಟ್ಟಾಗಿ ಮಾತ್ರ ಸ್ವಾತಂತ್ರ್ಯ ಗಳಿಸಬಲ್ಲುದೆಂದು ನಂಬಿದವನು. ಸ್ವಾತಂತ್ರ್ಯಕ್ಕಾಗಿ ಜೀವ ಮುಡಿಪಾಗಿಟ್ಟವನು. ಆದರೆ, ಅದಷ್ಟೇ ಆಂತಿಮ ಗುರಿಯೆಂದು ಭಾವಿಸಿದವನು. ಒಣಮರಗಳನ್ನು ಕಡಿಯುತ್ತಲೇ ಹೊಸ ಬೀಜಗಳ ಬಿತ್ತನೆಯ ಬಗ್ಗೆ ಆಲೋಚಿಸಿದವನು. ಉಗ್ರ ದೇಶಪ್ರೇಮಿ. ಎಂದರೆ, ಯಾವುದೋ ಭ್ರಾಮಕ ಭವ್ಯ ಸಾಮ್ರಾಜ್ಯದ ಪ್ರೇಮಿಯಲ್ಲ. ದೇಶವೆಂಬ ಮಾನವ ಸಮುದಾಯದ ಪ್ರೇಮಿ. ನಾವು ದಾರಿ ತಪ್ಪಿದರೂ ದಿಕ್ಕುತಪ್ಪದಂತೆ ತಡೆಯಬಲ್ಲ ಧ್ರುವತಾರೆ ಭಗತ್ ಸಿಂಗ್. ಅವನ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ|| ಜಿ. ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ಹೃದಯ ತುಂಬಿದ್ದಾರೆ...
Add to Cart20ನೇ ಶತಮಾನದ ಅತ್ಯುತ್ತಮ 100 ಅಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ, ಪರಮಹಂಸ ಯೋಗಾನಂದರ ಅಸಾಧಾರಣ ಜೀವನ ಚರಿತ್ರೆಯು ನಿಮ್ಮನ್ನು ಸಂತರ ಹಾಗೂ ಯೋಗಿಗಳ, ವಿಜ್ಞಾನ ಹಾಗೂ ಪವಾಡಗಳ, ಮರಣ ಹಾಗೂ ಪುನರುತ್ಥಾನಗಳ ಲೋಕದ ಅವಿಸ್ಮರಣೀಯ ಪರಿಶೋಧನೆಯೊಳು ಕೊಂಡೊಯ್ಯುತ್ತದೆ. ಪ್ರತಿಯೋರ್ವ ಮನುಜನ ಬಾಳಿನಲ್ಲಿರುವ ಆನಂದ, ಸೌಂದರ್ಯ ಹಾಗೂ ಅಸೀಮ ಅಧ್ಯಾತ್ಮಿಕ ಸಾಮರ್ಥ್ಯಗಳಿಗೆ ನಮ್ಮ ಹೃದಯ ಹಾಗೂ ಮನಸ್ಸುಗಳನ್ನು ತೆರೆಯುತ್ತಾ - ಅವರು ಆತ್ಮ-ತೃಪ್ತಿಗೊಳಿಸುವ ಜ್ಞಾನ ಹಾಗೂ ಅಕ್ಕರೆಯ ಚತುರೋಕ್ತಿಗಳಿಂದ, ಬದುಕಿನ ಹಾಗೂ ವಿಶ್ವದ ಅತ್ಯಂತ ಗಹನವಾದ ರಹಸ್ಯಗಳನ್ನು ವಿಶದಪಡಿಸಿದ್ದಾರೆ.ಗ್ರಂಥಕರ್ತರಿಂದ ಸ್ಥಾಪಿತವಾದ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಮೂಲಕ ಮಾತ್ರ ಲಭ್ಯವಿರುವ ಈ ಸಂಪೂರ್ಣ ಆವೃತ್ತಿಯು-1946ರ ನಂತರ ಅವರು ಸೇರಿಸಿದ ಬೃಹತ್ಪ್ರಮಾಣದ ಮಾಹಿತಿಗಳನ್ನೊಳಗೊಂಡ ಅಂತಿಮ ಮೂಲಗ್ರಂಥದ ಕುರಿತು ಅವರ ಎಲ್ಲಾ ಇಚ್ಛೆಗಳಿಗನುಸಾರವಿರುವ ಏಕೈಕ ಕೃತಿಯಾಗಿದೆ...
Add to Cart