ಕವನ/ನಾಟಕ
ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಗಿದ್ದರೂ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ. ಹೊಸ ಕಾಯದೆಗಳಿಗನುಸಾರವಾಗಿ ವೇಷ ಬದಲಿಸುವ ಬೀದಿಗಳ್ಳರು, ಪ್ರಾರ್ಥನೆಯ ಹೊತ್ತಿನಲ್ಲಿ ಕೊಲೆ ಮಾಡುವ ಸರದಾರರು, ರಾಜಕಾರಣವನ್ನು ದೇವರ ಕಾರ್ಯವೆಂದು ಭ್ರಮಿಸಿದ ಧರ್ಮಗುರುಗಳು, ಇಂಥ ವ್ಯಕ್ತಿಗಳ ದುರ್ದೈವಕ್ಕೆ ಸೂತ್ರಧಾರನಾದ ಮುಹಮ್ಮದ-ಹೀಗೆ ನಾಟಕದ ಮಾನುಷ ಪ್ರಪಂಚ ಜಟಿಲವಾಗಿದೆ. ವೇಷಾಂತರ, ಸ್ಥಳಾಂತರ, ಮತಾಂತರ-ಏನಾದರೂ ಕೊನೆಗೆ ಮುಹಮ್ಮದನಿಗೆ ಆಗುವುದು-ಮಾಂಸ ಭಕ್ಷವಾಗಿರುವ ತನ್ನ ಆತ್ಮದ ದರ್ಶನ. ಕಾವ್ಯ, ಧರ್ಮ, ರಾಜಕಾರಣ ಮೊದಲಾದ ತನ್ನ ದೌಲತ್ತಾಬಾದಿನವರೆಗೆ ತನ್ನ ರಾಜ್ಯವನ್ನು, ಪ್ರಜೆಗಳನ್ನೂ ನಡೆಸಿಕೊಂಡು ಹೋದ ಈ ಅರಸ, ‘ಆತ್ಮ-ಹತ್ಯೆ’ಯನ್ನು ಮಾಡಿಕೊಂಡೂ ಜೀವಂತವಾಗಿ ಉಳಿಯುತ್ತಾನೆ. ಇದೇ ಇಲ್ಲಿಯ ದುರಂತ...
Add to Cartಕಿಂಗ್ ಕ್ಲೀನ್ ದುಬೈ ಪ್ರವಾಸ ಕಥನ...(ದುಬೈನಲ್ಲೇಳು ದಿನ)ಸಾಹಿತಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಯವರ ಎರಡನೇ ಹೊತ್ತುಗೆ..
Add to Cartಕಳೆದೊಂದು ದಶಕದಲ್ಲಿ, ಅದರಲ್ಲೂ ಪ್ರಮುಖವಾಗಿ ರಾಷ್ತ್ರೀಯತೆಯ ಮರುವ್ಯಾಖ್ಯಾನದ ಈ ಕಾಲಘಟ್ಟದಲ್ಲಿ ನನ್ನ ಅಭಿರುಚಿಗೆ ಅನುಗುಣವಾಗಿ ಅಥವಾ ವಿರುದ್ಧವಾಗಿ ಜರುಗಿದ ಬಹುತೇಕ ಕ್ರಿಯೆಗಳಿಗೆ ನನ್ನ ಮರುಸ್ಪಂದನೆಯರೂಪದಲ್ಲಿ ನನ್ನ ಈ ಕವನ ಸಂಕಲನದ ಕವಿತೆಗಳು ಹೊರಬಂದಿರುವಂತದ್ದು. ಈ ಎಲ್ಲ ಕವಿತೆಗಳು ರಾಷ್ಟ್ರೀಯತೆ ಸುತ್ತ ಗಿರಕಿ ಹೊಡೆಯುತ್ತವೆ ಅಂತಲ್ಲ. ಈ ಪರಿಸ್ಥಿತಿಯ ಮತ್ತು ಈ ವಾತಾವರಣದಲ್ಲಿ ನಡೆದಂತಹ ಹಲವಾರು ಆಯಾಮದ ಘಟನೆಗಳಿಗೆ ನಾನು ಮಿಡಿದಿದ್ದೇನೆ ಎನ್ನುವುದು ಕಟುಸತ್ಯ.ಅವುಗಳಲ್ಲಿ, ರೈತ ಚಳುವಳಿ ಇರಬಹುದು, ನಮ್ಮ ದೇಶದ ವಿದೇಶಾಂಗ ವ್ಯವಹಾರ ಇರಬಹುದು ಅಥವಾ ಯಾವುದೋ ಒಂದು ಕಾನೂನಾತ್ಮಕ ಬದಲಾವಣೆ ಇರಬಹುದು ಅಥವಾ ನಮ್ಮ ದೇಶದ, ರಾಜ್ಯದ ಸರ್ಕಾರಗಳ ಆಡಳಿತಾತ್ಮಕ ಉದ್ದೇಶಗಳ ನಿರ್ಧಾರಗಳಿರಬಹುದು ಅಥವಾ ಸಾಮಾಜಿಕ, ರಾಜಕೀಯ ಅಥವಾ ಇತರೇ ಘಟಣೆಗಳೇ ಇರಬಹುದು.. ಇವೆಲ್ಲದಕ್ಕೂ ಕವಿಯ ಸ್ಪಂಧನೆಯ ರೂಪದಲ್ಲಿ ಆಯಾ ಸಂದರ್ಭಕ್ಕನುಸಾರವಾಗಿ ಹೊಮ್ಮಿದ ಭಾವನಾತ್ಮಕ ಮಡಿವಂತಿಕೆ ಇವುಗಳ ವಸ್ತು.. -ಸಿದ್ರಾಮ್ ಪಾಟೀಲ..
Add to Cart‘ಯತ್ಕಿಂಚಿತ್’ ಕವನಸಂಕಲನ ಭಾವನಾತ್ಮಕ ಸಂವೇದನೆಗೆ ಒಂದು ವೇದಿಕೆ. ಕವಿಯ ಕಲ್ಪನೆಗಳು, ಪದಗಳಾಗಿ ಪ್ರತಿಮೆಗಳ ಮೂಲಕ ಹೊಮ್ಮಿ ಸಹೃದಯರ ಮನಮುಟ್ಟುವಲ್ಲಿ ಸಾರ್ಥಕತೆಯನ್ನು ಪಡೆಯುವಂತಹವು. ಜಯಶ್ರೀಯವರ ಬರಹದ ಪ್ರೌಢಿಮೆಯಲ್ಲಿ ಪದಗಳ ಲಾಲಿತ್ಯ, ದೇಶೀಯ ಪ್ರಯೋಗಗಳು, ಅದ್ಭುತವಾಗಿ ಮೂಡಿಹೊಸದೇ ಅನುಭವ ನೀಡುವಂತಹವು...
Add to Cart