ರೋಚಕಥೆ(ನಾಗೇಶ್ ಕುಮಾರ್ ಸಿ.ಎಸ್) - Rocha Kathe(Nagesh Kumar C S)
- ₹150
4 ಸಸ್ಪೆನ್ಸ್ ಕಥೆಗಳ ಸಂಕಲನ ಪುಸ್ತಕ-"ರೋಚಕಥೆ"
Reviews
There are no reviews for this product.
4 ಸಸ್ಪೆನ್ಸ್ ಕಥೆಗಳ ಸಂಕಲನ ಪುಸ್ತಕ-"ರೋಚಕಥೆ"
There are no reviews for this product.
Related Products
‘ರಹಸ್ಯಾಯನ’ ಹೆಸರೇ ಸೂಚಿಸುವಂತೆ ನಿಗೂಢತೆಯತ್ತ ಸಾಗುವ ಪ್ರಯಾಣ. ಸಿ.ಎಸ್. ನಾಗೇಶ್ ಕುಮಾರ್ ಈ ದಿನಗಳಲ್ಲಿ ಪತ್ತೇದಾರಿ ಕಥೆಗಳು, ಕಾದಂಬರಿಗಳನ್ನು ಬರೆಯುವವರ ಪೈಕಿ ಮುಂಚೂಣಿಯಲ್ಲಿರುವವರು. ಒಂದು ವಿಧದಲ್ಲಿ ಅವರು ನಮ್ಮ ಪ್ರಕಾಶನ ಸಂಸ್ಥೆಯ ‘ಶೋಧ’ ಮತ್ತು ಆಸ್ತಿ, ಅದಾವುದನೋ ಅದಾವುದಕೋ ಕೊಂಡಿ ಹಾಕಿ, ಇದಮಿತ್ಥಂ ಎಂದು ಓದುಗನು ನಿರ್ಧರಿಸುವ ಕ್ಷಣದಲ್ಲಿ ಕಲ್ಪನೆಗಳನ್ನು ಬುಡಮೇಲು ಮಾಡುವ ರೀತಿಯಲ್ಲಿ ತಿರುವುಗಳನ್ನಿತ್ತು ಕಥೆ ಹೆಣೆಯುವುದರಲ್ಲಿ ಕರಗತರಿವರು. ಪುರಾಣದ ಕಥೆಗಳನ್ನು ಮೂಲವಾಗಿ ಇರಿಸಿಕೊಂಡು ನವೀನ ಮಾದರಿಯಲ್ಲಿ ಜಾಲಗಳನ್ನು ಹೆಣೆಯುವುದು, ವೈಜ್ಞಾನಿಕ ಸಾಧ್ಯತೆಗಳ ಮಿತಿಯನ್ನು ವಿಸ್ತರಿಸುತ್ತಾ ಸೈನ್ಸ್ ಫಿಕ್ಷನ್ ಮಾದರಿಯ ಕೌತುಕಮಯ ಕಥಾಹಂದರವನ್ನು ಕಟ್ಟುವುದು, ಆಂಗ್ಲದ ಸುಪ್ರಸಿದ್ಧ ಬರಹಗಾರರ ಕಥೆಗಳನ್ನು ಕನ್ನಡೀಕರಿಸುವುದರಲ್ಲಿ ನಾಗೇಶ್ ಕುಮಾರರ ಕೈ ಚೆನ್ನಾಗಿ ಪಳಗಿರುವುದು ಇಲ್ಲಿನ ಕಥೆಗಳಲ್ಲಿಯೂ ವಿದಿತ.ವಿಭಿನ್ನವೂ, ವೈವಿಧ್ಯಮಯವೂ, ರೋಚಕವೂ ಆದ ಕಥೆಗಳನ್ನು ಹೊಂದಿರುವ ‘ರಹಸ್ಯಾಯನ’ ಓದುತ್ತಾ ಉಗುರುಗಳನ್ನು ಕಚ್ಚುವಾಗ ಬೆರಳುಗಳಿಗೆ ಗಾಯವಾದರೆ ಲೇಖಕರಾಗಲಿ, ಪ್ರಕಾಶಕರಾಗಲಿ ಜವಾಬ್ದಾರರಲ್ಲ ಎಂದು ಮೊದಲೇ ತಿಳಿಸಿಬಿಡುತ್ತಿದ್ದೇವೆ!..
Add to Cartಬೇಸಿಗೆಯಲ್ಲಿ ಅಂಟಾರ್ಟಿಕಾ ಮೈಯನ್ನು ಮರಗಟ್ಟಿಸುತ್ತದೆ. ಚಳಿಗಾಲದಲ್ಲಿ ಮೂಗುಜ್ಜಿಕೊಂಡರೆ ಚರ್ಮ ಸುಲಿದಿರುವುದು ಕನ್ನಡಿಯನ್ನು ನೋಡಿಕೊಂಡಾಗಲೇ, ಚಳಿಯ ಪರಮಾವಧಿಗೆ ಅಲ್ಲಿ ಸಿಲುಕಿದವರ ಮೈ ವೈಬ್ರೇಟರ್ ಮೋಡ್ನಲ್ಲಿರುವ ಮೊಬೈಲ್ನಂತೆ ನಡುಗುತ್ತಿರುತ್ತದೆ. ಹವಾಮಾನ ಹೀಗಿರುವಾಗ ಕೊಲೆಗಾರನೊಬ್ಬನು ಸನಿಹದಲ್ಲಿಯೇ ಇದ್ದಾನೆಂಬ ಭಯದಿಂದ ಮೂಡಿದ ಚಳಿಯೂ ಸೇರಿದರೆ… ಊಹೆಗೆ ನಿಲುಕದ ತನು-ಮನಥಂಡಿ!ಟೆನ್ಅಲಿಸ್ಟರ್ ಮ್ಯಾಕ್ಲೀನ್ ಆಂಗ್ಲದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ಪೈಕಿ ಅಗ್ರಪಂಕ್ತಿಯಲ್ಲಿರುವವನು. ಮ್ಯಾಕ್ಲೀನಿನ ‘ಗನ್ ಆಫ್ ನವರೋನ್’, ನವರೋನ್” ಮುಂತಾದ ಕೃತಿಗಳು ಚಲನಚಿತ್ರಗಳಾಗಿಯೂ ವಿಶ್ವವಿಖ್ಯಾತವಾಗಿವೆ. ಆತನ ಇಂಗ್ಲಿಷ್ ಭಾಷಾ ಪ್ರಯೋಗದಲ್ಲಿ ಕ್ಲಿಷ್ಟತಮ ನಾವೀನ್ಯತೆ ಇರುತ್ತದೆ. ವಿಷಯಮಂಡಣೆಗೆ ಮುನ್ನ ಆಳವಾದ ಅಧ್ಯಯನವಿರುತ್ತದೆ. ಈ ಕೃತಿಯ ಅನುವಾದಕ್ಕೆ ವಸ್ತುವಾದ ‘ನೈಟ್ ವಿತೌಟ್ ಎಂಡ್’ ಚಳಿಗಾಲದ ಧ್ರುವಪ್ರದೇಶದ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತಲೇ ಹಲವಾರು ವೈಜ್ಞಾನಿಕ ಸತ್ಯಗಳನ್ನೂ, ಕಲ್ಪನೆಗಳನ್ನೂ ಹದವಾಗಿ ಹೆಣೆದು ಕೊಟ್ಟಿದೆ. ಈ ಪರಿಪಕ್ವ ಪಾಕವನ್ನು ಗೆಳೆಯ ನಾಗೇಶ್ ಕುಮಾರ್ ‘ಕೊನೆಗಾಣದ ರಾತ್ರಿ’ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಿಗರಿಗೆ ಸೊಗಸಾಗಿ ಉಣಬಡಿಸಿದ್ದಾರೆ. ಮೂಲ ಕೃತಿಗೆ ನಿಷ್ಠವಾಗಿರುವ ಈ ಕೃತಿಯು ಗೂಢಚಯ್ಯ, ನಿಗೂಢತೆಗಳನ್ನು ಇಷ್ಟಪಡುವ ಓದುಗರ ಮನೆಯ ಕಪಾಟಿಗೆ ಶೋಭೆ ತರುವುದು ಸುನಿಶ್ಚಿತ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034