ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

Search - ಶಿಕಾರಿ

Search Criteria
ಕಾವ್ಯಾರ್ಥ ಚಿಂತನ - Kavyartha Chintana(Shivarudrappa G S) Sold out
ಕಾವ್ಯಾರ್ಥ ಚಿಂತನ - Kavyartha Chintana(Shivarudrappa G S)
₹200 Ex Tax: ₹200

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹುಟ್ಟಿದ್ದು ೧೯೨೬ರಲ್ಲಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ. ೧೯೫೩ರಲ್ಲಿ ಮೈಸೂರು ವಿಶ್ವದ್ಯಾನಿಲಯದಿಂದ ಮೂರು ಚಿನ್ನದ ಪದಕಗಳೊಡನೆ ಎಂ.ಎ. ಪದವಿ; ೧೯೬೫ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ `ಸೌಂದರ್ಯ ಸಮೀಕ್ಷೆ` ಪ್ರೌಢಪ್ರಬಂಧಕ್ಕಾಗಿ ಡಾಕ್ಟೊರೇಟ್ ಪದವಿ. ೧೯೪೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಶಿವರುದ್ರಪ್ಪನವರು ೧೯೬೩ರಿಂದ ೧೯೬೬ರ ವರೆಗೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು; ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾದರು. ಶಿವರುದ್ರಪ್ಪನವರು ಕನ್ನಡದ ಅಗ್ರಶ್ರೇಣಿಯ ಕವಿಗಳಲ್ಲಿ ಒಬ್ಬರಾಗಿ ಮನೆಮಾತಾಗಿರುವವರು. ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ಗೋಡೆ, ಕಾರ್ತೀಕ, ಪ್ರೀತಿ ಇಲ್ಲದ ಮೇಲೆ, ಹೀಗೆ ಅವರ ೧೩ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟವಾಗಿವೆ. ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ, ಮಹಾಕಾವ್ಯ ಸ್ವರೂಪ, ಅನುರಣನ, ಕನ್ನಡ ಕವಿಗಳ ಕಾವ್ಯಕಲ್ಪನೆ, ಅವರ ವಿಮರ್ಶಾ ಕೃತಿಗಳಲ್ಲಿ ಮುಖ್ಯವಾದುವು. ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚಾತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಪ್ರವಾಸ ಕಥನಗಳು. ಶಿವರುದ್ರಪ್ಪನವರು ಪಡೆದಿರುವ ಅನೇಕಾನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ಕರ್ನಾಟಕದ ರಾಷ್ಟ್ರಕವಿ ಗೌರವ (೨೦೦೬), ಸೋವಿಯೆಟ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೩), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಪಂಪ ಪ್ರಶಸ್ತಿ (೧೯೯೮), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೨), ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ (೨೦೧೦) ಮುಖ್ಯವಾದುವು. ದಾವಣಗೆರೆಯಲ್ಲಿ ನಡೆದ ೬೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದ ಶಿವರುದ್ರಪ್ಪನವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪ್ರಶಸ್ತಿಗಳೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ `ನಾಡೋಜ` ಪ್ರಶಸ್ತಿಯೂ ಲಭಿಸಿವೆ...

Sold out
ಶಿಕಾರಿ - Shikari(Yeshwanth Chittal)
₹245 Ex Tax: ₹245

ಯಶವಂತ ಚಿತ್ತಾಲರ ‘ಶಿಕಾರಿ’ಯ ಕೇಂದ್ರ ಪ್ರತಿಮೆ ಬೇಟೆ. ಇದು ಕಾದಂಬರಿಯ ಉದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಾರಕ್ಕೆ ಸಂಬಂಧಪಟ್ಟ ಬೇಟೆಯ ಕ್ರಿಯೆ ಮನುಷ್ಯನ ಮೂಲಪ್ರವೃತ್ತಿಗಳಿಗೆ ಸಂಬಂಧಪಟ್ಟದ್ದು. ಆದರೆ, ಈ ಕಾದಂಬರಿಯಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು, ಪಕ್ಷಿಗಳ ಬೇಟೆಯಾಗಿರದೆ ಇಂದಿನ ಔದ್ಯೋಗೀಕೃತ ನಾಗರೀಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ. ‘ಶಿಕಾರಿ’ಯ ಕೇಂದ್ರ ವ್ಯಕ್ತಿ ನಾಗಪ್ಪ ಇಲ್ಲಿ ಬೇಟೆಯ ಗುರಿ. ಸ್ವಾರ್ಥ, ಸ್ವಹಿತ-ರಕ್ಷಣೆಗಳ ಉದ್ದೇಶಗಳಿಂದ ಒಂದಾದ ಬೇಟೆಗಾರರ ತಂಡವೇ ಅವನ ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚುಹಾಕುತ್ತದೆ. ಇಂಥ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೇ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೇ? ಇಂಥ ಸನ್ನಿವೇಶ ಹುಟ್ಟಿತಾದರೂ ಹೇಗೆ? ಅದಕ್ಕೆ ಹೊಣೆಗಾರರು ಯಾರು? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಎತ್ತುವುದರ ಮೂಲಕ ‘ಶಿಕಾರಿ’ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ...

Add to Cart
Showing 1 to 2 of 2 (1 Pages)