ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್ಜೀವನದಲ್ಲಿ ಧೈರ್ಯ, ಸಂತೋಷ, ಸಮತೋಲ, ಸಮೃದ್ಧಿಗಳನ್ನು ಸಾಧಿಸಲು ಅಗತ್ಯವಾಡ ವ್ಯವಸ್ಥಿತ ಮಾರ್ಗವನ್ನು ಈ ಸ್ಪೂರ್ತಿದಾಯಕ ಕೃತಿ ತೋರುತ್ತದೆ. ಅದ್ಭುತ ಕೌಶಲದಿಂದ ಕೂಡಿದ ದೃಷ್ಟಾಂತ ಕಥೆಯಿದು. ‘ಫೆರಾರಿ ಮಾರಿದ ಫಕೀರ’ - ಬದುಕಿನ ಸಮತೋಲ ಕೆಡಿಸಿಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರನ ಕಥೆ. ಜೀವನವನ್ನೇ ಪರಿವರ್ತನೆ ಮಾಡುವ ಪ್ರಾಚೀನ ಸಂಸ್ಕೃತಿಯ ಕೇಂದ್ರಕ್ಕೆ ಯಾತ್ರೆ ಮಾಡಿ, ಅಲ್ಲಿ, ಆನಂದದಾಯಕ ಯೋಚನೆ, ಜೀವನದ ಪರಮಗುರಿಯ ಸಾಧನೆ, ಸಂಯಮ, ಧೈರ್ಯ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳುವುದು, ಸಮಯದ ಮಹತ್ವವನ್ನು ಅರಿಯುವುದು ಮತ್ತು ಸಂಬಂಧಗಳನ್ನು ಪೋಷಿಸುವುದನ್ನು ಮತ್ತು ಪ್ರತಿದಿನದಲ್ಲೂ ಪರಿಪೂರ್ಣವಾಗಿ ಬಾಳುವುದನ್ನೂ ಕಲಿಸುವ ಶಕ್ತಿಶಾಲಿ, ಪ್ರಾಯೋಗಿಕ ವಿವೇಕಯುತ ಪಾಠಗಳನ್ನು ಕಲಿಸಿಕೊಡುತ್ತದೆ...