ಜನನ-1890
ಪುಸ್ತಕಗಳು –
ಕಾಲಿದಾಸನ ಭವಭೂತಿಯ ಭಾಸನ ಸಂಸ್ಕೃತನಾಟಕಗಳನ್ನು ಅನುವಾದಿಸಿದ್ದಾರೆ. ಬೆಂಗಾಲಿಭಾಷೆಯಲ್ಲಿ ಪ್ರಸಿದ್ಧರಾದ ಬಂಕಿಮಚಂದ್ರ ಚಟರ್ಜಿಯವರ ಜೀವನಚರಿತ್ರೆಯನ್ನು ಬರೆದಿದ್ದಾರೆ. ಪ್ರೋ ಕೃಷ್ಣಶಾಸ್ತ್ರಿಗಳು ಅನೇಕ ಕಥೆಗಳನ್ನು ಕಾದಂಬರಿಗಳನ್ನು ಬರೆದಿದ್ದಾರೆ. ಇವರು ತಮ್ಮ ವಚನಭಾರತ, ನಿರ್ಮಲಭಾರತೀ ಕಥಾಮೃತ ಪುಸ್ತಕಗಳಿಂದ ಪ್ರಸಿದ್ಧರಾಗಿದ್ದಾರೆ. ವಚನಭಾರತ ಮತ್ತು ನಿರ್ಮಲಭಾರತಿ ಮಹಾಭಾರತದ ಉತ್ಕೃಷ್ಟವಾದ ಸಂಗ್ರಹ. ಕಥಾಮೃತವು ಕಥಾಸರಿತ್ಸಾಗರದ ಕಥೆಗಳ ಸಂಗ್ರಹ. ಕಥಾಮಿತ್ರದಲ್ಲಿ ವೈದೇಶಿಕ ಕಥೆಗಳಗೆ ಭಾರತೀಯ ಕಥೆಗಳಿಗೆ ಸಂಬಂಧಿಸಿದ ಉತ್ತಮವಾದ ಪರಿವಿಡಿ ಇದೆ. ಪ್ರೋ ಕೃಷ್ಣಶಾಸ್ತ್ರೀ ಪ್ರಬುದ್ಧಕರ್ನಾಟಕ ಎಂಬ ಪ್ರಥಮಕನ್ನಡವಾರ್ತಾಪತ್ರಿಕೆಯನ್ನು ೧೯೧೮ ರಲ್ಲಿ ಆರಂಭಿಸಿದರು. ಅದರ ಸಂಪಾದಕರಾಗಿ ಕೂಡಾ ಕಾರ್ಯನಿರ್ವಹಿಸಿದರು.
ಪಡೆದ ಪ್ರಶಸ್ತಿಗಳು –ಸಾಹಿತ್ಯ ಅಕಾಡಮಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿಯನ್ನು ಪಡೆದಿದ್ದಾರೆ.