ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಹಂಸಗೀತೆ - Hamsageethe(Ta Ra Su)

  • ₹100

Add to Wish List

Compare this Product

Ex Tax: ₹100

Availability: 2-3 Days

Product Code: HAMSAGEETHE

ತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾಡ ವರ್ಣನೆ, ಅಂತಃಕರಣ ಉಕ್ಕಿಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಮನದ ಮೆಲು ನಿಟ್ಟುಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.

ಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ, ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ತ.ರಾ.ಸು. ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ.

Author
Ta Ra Su
Publisher
Hemantha Sahitya

Reviews

There are no reviews for this product.

Write a review

Note: HTML is not translated!