ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಚದುರಿದ ಮೋಡ ಮಳೆಗರೆದಾಗ - Chadurida Moda Malegerdaga(Vishweshwar Bhat)

  • ₹80

Add to Wish List

Compare this Product

Ex Tax: ₹80

Availability: In Stock

Product Code: CHADURIDAMODAMALEGERDAGA

ಇವು ಅಲ್ಲಲ್ಲಿ, ಆಗಾಗ ಬರೆದ ಬರಹಗಳ ಸಂಗ್ರಹ. ಪತ್ರಕರ್ತನಾದವನು ಇಂಥ ಬರಹಗಳನ್ನು ಸಂಗ್ರಹಿಸಿ ಇಡದಿದ್ದರೆ ಕೈಗೆ ಸಿಗದ ಪಾತರಗಿತ್ತಿಗಳಂತೆ ಹಾರಿಹೋಗುತ್ತವೆ. ಪ್ರತಿದಿನ ಬರೆದ ಎಲ್ಲ ಬರಹಗಳನ್ನು ಸಂಗ್ರಹಿಸಿಡಲು ಸಾಧವಿಲ್ಲ. ಎಲ್ಲ ಬರಹಗಳನ್ನು ಸಂಗ್ರಹಿಸಿಡುವ ಅಗತ್ಯವೂ ಇರುವುದಿಲ್ಲ. ಬರೆಯುವುದರ ಜತೆಗೆ ಸಂಗ್ರಹಕಾರನ ಕೆಲಸವನ್ನೂ ಮಾಡಬೇಕಾಗುತ್ತದೆ. ಇವು ಮಹತ್ತರ ಬರಹಗಳೆಂಬ ಯಾವುದೇ ಡೌಲು ನನ್ನಲ್ಲಿ ಇಲ್ಲ.

ವಿಶೇಷ ಸಂಚಿಕೆಗಳಿಗೆ ಬರೆದ ಲಘು ಧಾಟಿಯ ಸಂಪಾದಕೀಯಗಳಿವು. ಸಂಪಾದಕೀಯ ಅಂದ ಕೂಡಲೇ ಹಠಾತ್ತನೆ ಗಂಭೀರವದನರಾಗಬೇಕಿಲ್ಲ. ಹಾಗಂತ ಇದು ಜಾಲಿ ಮೂಡಿನ ಬರಹಗಳೂ ಅಲ್ಲ. ಯಾವುದೇ ಪ್ರಕಾರದ ಬರಹಗಳಿರಲಿ, ಸಂಪಾದಕೀಯವೋ, ದಂತವೈದ್ಯವೋ, ಜ್ಯೋತಿಷ್ಯವೋ, ಅದು ಓದುಗನನ್ನು ಆವರಿಸಿಕೊಂಡು ಓದಿಸಿಕೊಳ್ಳಬೇಕು. ಅದು ಯಾವುದೇ ಬರಹದ ಮೂಲದ್ರವ್ಯ. ಆ ಹಿನ್ನೆಲೆಯಲ್ಲಿ ಮೂಡಿದ ಬರಹಗಳಿವು ಎಂಬ ಪ್ರವೇಶನುಡಿ ಸಾಕು. ಉಳಿದಂತೆ ಅನ್ನ ಬೆಂದಿದೆಯೋ, ಇಲ್ಲವೋ ಎಂಬುದನ್ನು ಹಿಚುಕಿನೋಡಲು ನೀವು ಇದ್ದೇ ಇದ್ದೀರಿ.

ಎಲ್ಲೆಲ್ಲೋ ಚರುದಿಹೋದ ಮೋಡಗಳೆಲ್ಲ ಒಂದೆಡೆ ಸೇರಿದಾಗಲೇ ಮಳೆಯಾಗೋದು. ಚದುರಿಹೋಗುತ್ತಿದ್ದ ಬರಹಗಳೆಲ್ಲ ಇಲ್ಲಿ ಸೇರಿ ಪುಸ್ತಕವಾಗಿದೆ. ಒಂದಕ್ಕೊಂದು ಸಂಬಂಧವಿರದ ಲೇಖನಗಳಿವು. ಹೀಗಾಗಿ ಇವುಗಳನ್ನು ಆರಂಭದಿಂದ ಒಂದು ಕ್ರಮದಲ್ಲಿ ಓದಬೇಕೆಂದಿಲ್ಲ. ಯಾವ ಅಧ್ಯಾಯದಿಂದ ಬೇಕಾದರೂ ಓದಬಹುದು

Author
Vishweshwar Bhat
Publisher
Sahitya Prakashana

Reviews

There are no reviews for this product.

Write a review

Note: HTML is not translated!